ಸೋಮವಾರ, ಫೆಬ್ರವರಿ 7, 2011

ಕನ್ನಡ ಸಾಹಿತ್ಯ ಸಮ್ಮೇಳನ ನಿರ್ಣಯಗಳು

ಬೆಂಗಳೂರು, ಫೆ. 6: 77 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಬಹಿರಂಗ ಅಧಿವೇಶನವನ್ನು ಕನ್ನಡ ಸಾಹಿತ್ಯ ಪರಿಷತ್ತು ಇಂದು ಹಮ್ಮಿಕೊಂಡಿತ್ತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ. ನಲ್ಲೂರು ಪ್ರಸಾದ್ ಆರ್ ಕೆ ಅವರು ವಹಿಸಿಕೊಂಡಿದ್ದರು. ಸಾಹಿತ್ಯ ಸಮ್ಮೇಳನಾಧ್ಯಕ್ಷ ಪ್ರೊ, ಜಿ ವೆಂಕಟಸುಬ್ಬಯ್ಯ ಅವರ ಅಣತಿಯಂತೆ ಪ್ರಮುಖ ನಿರ್ಣಯಗಳನ್ನು ಪುಂಡಲೀಕ ಹಾಲಂಬಿ ಅವರು ಮಂಡಿಸಿದರು.

77ನೇ ಸಾಹಿತ್ಯ ಸಮ್ಮೇಳನದಲ್ಲಿ ತೆಗೆದುಕೊಂಡ ಪ್ರಮುಖ ನಿರ್ಣಯಗಳು ಈ ಕೆಳಗಿನಂತಿವೆ:

* ವ್ಯಾವಹಾರಿಕವಾಗಿ ಕನ್ನಡವನ್ನು ಅನ್ಯಭಾಷಿಕರು ಬಳಸಲೇ ಬೇಕು
* ಈ ಹಿಂದಿನ ಸಮ್ಮೇಳನಗಳಲ್ಲಿ ತೆಗೆದುಕೊಂಡ ನಿರ್ಣಯಗಳ ತ್ವರಿತ ಜಾರಿಗೆ ಆಗ್ರಹ. ಇದಕ್ಕಾಗಿ ಉಪ ಸಮಿತಿ ರಚನೆ.
* ಪ್ರಾಥಮಿಕ ಶಿಕ್ಷಣ(1ನೇ ತರಗತಿ ಇಂದ 4ನೇ ತರಗತಿವರೆಗೆ) ದಲ್ಲಿ ಕನ್ನಡ ಮಾಧ್ಯಮ ಕಡ್ಡಾಯಗೊಳಿಸುವುದು.
* ಕೇಂದ್ರೀಯ ಶಾಲೆಗಳಲ್ಲಿ ತ್ರಿಭಾಷಾ ಸೂತ್ರದಂತೆ ಪಾಠ ಪ್ರವಚನ ನಡೆಸಬೇಕು ಅದರಲ್ಲಿ ಕನ್ನಡ ಕಡ್ಡಾಯವಾಗಿರಲೇಬೇಕು.
* ಕನ್ನಡ ಪರ ಹೋರಾಟಗಾರರ ವಿರುದ್ಧದ ಎಲ್ಲಾ ಕೇಸುಗಳನ್ನು ವಾಪಾಸ್ ಪಡೆಯಬೇಕು.
* ಪರಿಷತ್ತಿನ ಜಿಲ್ಲಾ ಘಟಕಗಳಿಗೆ ಉಚಿತ ನಿವೇಶನ ಬೇಕು.
* ಪಂಪ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಆದಿಕವಿ ಪಂಪನ ಜನ್ಮಸ್ಥಳ ಗದಗಿನ ಅಣ್ಣಿಗೇರಿಯಲ್ಲೇ ಆಯೋಜಿಸಬೇಕು.
* ಚಿದಾನಂದ ಮೂರ್ತಿಗೆ ಗೌರವ ಡಾಕ್ಟರೇಟ್ ತಡೆ ನೀಡಿದ ರಾಜ್ಯಪಾಲರ ವಿರುದ್ಧ ಖಂಡನಾ ನಿರ್ಣಯ.
* ಡಬ್ಬಿಂಗ್ ಸಂಸ್ಕೃತಿಗೆ ಅವಕಾಶ ಬೇಡ. ಸ್ವಮೇಕ್ ಚಿತ್ರಗಳಿಗೆ ಆದ್ಯತೆ ನೀಡಿ.
* ಹೈದರಾಬಾದ್ ಕರ್ನಾಟಕ ಕ್ಷೇತ್ರಕ್ಕೆ ವಿಶೇಷ ಆದ್ಯತೆ ಅಗತ್ಯ.371 ವಿಧೇಯಕ ಜಾರಿಗೆ ಆಗ್ರಹ