ಭಾನುವಾರ, ಫೆಬ್ರವರಿ 6, 2011

ಮಾನ್ಯ ಮುಖ್ಯಮಂತ್ರಿಯವರ ಭಾಷಣ

೭೭ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ
ಮಾನ್ಯ ಮುಖ್ಯಮಂತ್ರಿಯವರ ಭಾಷಣ
೦೪-೦೨-೨೦೧೧ / ಮಧ್ಯಾಹ್ನ ೦೧-೦೦ ಗಂಟೆ / ನ್ಯಾಷನಲ್ ಕಾಲೇಜು ಮೈದಾನ
ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸಾನಿಧ್ಯ ವಹಿಸಿರುವ ಪೂಜ್ಯ ಆದಿಚುಂಚನಗಿರಿ ಮಹಾಸ್ವಾಮೀಜಿಯವರಿಗೆ ಬsಕ್ತಿಪೂರ್ವಕ ನಮನಗಳನ್ನು ಸಲ್ಲಿಸುತ್ತಾ,
೭೭ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಾದsಕ್ಷರಾದ ಪ್ರೊ ಜಿ. ವೆಂಕಟಸುಬ್ಬಯ್ಯ ಅವರೆ,
೭೬ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅದ
sಕ್ಷರಾದ ಡಾಃ ಗೀತಾ ನಾಗಭೂಷಣ್ ಅವರೆ,
ಹಿರಿಯ ಸಾಹಿತಿಗಳಾದ ನಾಡೋಜ ದೇ. ಜವರೇಗೌಡ ಅವರೆ
,
ಕೇಂದ್ರ ಕಾನೂನು ಸಚಿವರಾದ ಶ್ರೀ ಎಂ. ವೀರಪ್ಪ ಮೊಯಿಲಿ ಅವರೆ
,
ಗೃಹ ಮತ್ತು ಸಾರಿಗೆ ಸಚಿವ ಹಾಗೂ ಸ್ವಾಗತ ಸಮಿತಿಯ ಅಧ್ಯಕ್ಷರು ಆದ ಶ್ರೀ ಆರ್. ಅಶೋಕ್ ಅವರೆ
,
ಕನ್ನಡ ಮತ್ತು ಸಂಸ್ಕೃತಿ ಸಚಿವರಾದ ಶ್ರೀ ಗೋವಿಂದ ಕಾರಜೋಳ ಅವರೆ
,
ವಸತಿ ಸಚಿವರಾದ ಶ್ರೀ ಸೋಮಣ್ಣ ಅವರೆ
, ಸಂಸದರಾದ ಶ್ರೀ ಅನಂತಕುಮಾರ್ ಅವರೆ,
ಕನ್ನಡ ಸಾಹಿತ್ಯ ಪರಿಷತ್‌ನ ರಾಜ್ಯಾದ
sಕ್ಷರಾದ ಡಾಃ ಆರ್.ಕೆ. ನಲ್ಲೂರು ಪ್ರಸಾದ್ ಅವರೆ,
ವೇದಿಕೆಯ ಮೇಲೆ ಉಪಸ್ಥಿತರಿರುವ ಶಾಸಕ ಮಿತ್ರರೆ
, ಎಲ್ಲಾ ಸಾಹಿತಿ ಹಾಗೂ ಸಾಹಿತ್ಯ ಪ್ರಿಯರೆ, ಅಧಿಕಾರಿ ಮಿತ್ರರೆ, ಸಮಸ್ತ ಕನ್ನಡ ಬಂದsಗಳೆ,
೧.       ಜಾಗತಿಕ ಮಹಾನಗರ, ಕರ್ನಾಟಕ ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಆಯೋಜಿಸಲಾಗಿರುವ ೭೭ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಉದ್ಫಾಟಿಸುವ ಸದವಕಾಶ ತಮ್ಮೆಲ್ಲರ ಸದಾಶಯದಿಂದಾಗಿ ದೊರೆತಿರುವುದು ನನ್ನಲ್ಲಿ ಅತೀವ ಹರ್ಷವನ್ನುಂಟುಮಾಡಿದೆ.
೨.       ಕರುನಾಡ ಸಿರಿನುಡಿಯ ದೀಪ ಬೆಳಗಿಸಿ ಕನ್ನಡದ ಡಿಂಡಿಮವನ್ನು ಮೊಳಗಿಸಲು ನಮಗೆ ಅವಕಾಶ ದೊರೆತಿರುವ ಮಹತ್ವದ ಸಮ್ಮೇಳನವಿದು.
೩.       ನಾಲ್ಕು ದಶಕಗಳ ನಂತರ ಈ ನುಡಿಹಬ್ಬವನ್ನು ಬೆಂಗಳೂರಿನಲ್ಲಿ ಆಚರಿಸಲಾಗುತ್ತಿದೆ. ೧೯೭೦ರಲ್ಲಿ ೪೭ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಬೆಂಗಳೂರಿನಲ್ಲಿ ನಡೆದಿತ್ತು. ಆ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದ ದೇ.ಜವರೇಗೌಡ ಅವರು ಇಂದು ನಮ್ಮ ನಡುವೆ ಇರುವುದು ಅತ್ಯಂತ ಸಂತಸದ ಸಂಗತಿಯಾಗಿದೆ.
೪.       ಈ ನಾಲ್ಕು ದಶಕಗಳಲ್ಲಿ ಬೆಂಗಳೂರು ಅನೂಹ್ಯ ರೀತಿಯಲ್ಲಿ ಬೆಳೆದಿದೆ. ಬಹುವಿಧದಲ್ಲಿ ರೂಪಾಂತರಹೊಂದಿದೆ. ವಿವಿಧತೆಯಲ್ಲಿ ಏಕತೆ ಎಂಬ ವಿಶಿಷ್ಟ ಭಾರತೀಯ ಮೌಲ್ಯದ ಒಂದು ಗಟ್ಟಿ ಉದಾಹರಣೆಯಾಗಿದೆ. 
೫.       ಸರಿಸುಮಾರು ಒಂದು ಕೋಟಿ ಜನಸಂಖ್ಯೆಯನ್ನು ತನ್ನ ಒಡಲಿನಲ್ಲಿ ಪೋಷಿಸುತ್ತಿರುವ ಬೆಂಗಳೂರು ಮಹಾನಗರದಲ್ಲಿ ಕನ್ನಡಿಗರ ಒಟ್ಟೊಟ್ಟಿಗೆ ಕನ್ನಡೇತರರು ಬದುಕುತ್ತಿದ್ದಾರೆ. ಕನ್ನಡಿಗರ ಆತಿಥ್ಯ ಪ್ರಿಯತೆ, ಸಹನಶೀಲತೆ, ಸೋದರಭಾವ ಹಾಗೂ ಎಲ್ಲರೊಳಗೆ ಒಂದಾಗುವ ಗುಣವಿಶೇಷದಿಂದಾಗಿ ಕನ್ನಡೇತರರ ಬದುಕಿಗೆ ಭದ್ರತೆ ದೊರೆತಿದೆ.
೬.       ಕರ್ನಾಟಕದಲ್ಲಿರುವ ಸುಮಾರು ಆರು ಕೋಟಿ ಜನರೆಲ್ಲರೂ ಕನ್ನಡಿಗರೇ ಎಂದು ನಾವು ಭಾವಿಸಿದ್ದೇವೆ. ಆದ್ದರಿಂದ ಈ ನೆಲದ ಭಾಷೆ ಮತ್ತು ಸಂಸ್ಕೃತಿಗೆ ಕನ್ನಡೇತರರು ಯಥೋಚಿತವಾಗಿ ಸ್ಪಂದಿಸಬೇಕೆಂಬುದು ಕನ್ನಡಿಗರ ಸಹಜ ಬಯಕೆಯಾಗಿದೆ.
೭.       ಎರಡು ಸಾವಿರ ವರ್ಷಗಳಿಗೂ ಮಿಕ್ಕ ಅಮೂಲ್ಯ ಇತಿಹಾಸವಿರುವ ಕನ್ನಡ ಭಾಷೆಗೆ ಶಾಸ್ತ್ರೀಯ ಭಾಷೆಯ ಸ್ಥಾನಮಾನವೇನೋ ದೊರೆತಿದೆ. ಆದರೆ ಆ ಸ್ಥಾನಮಾನದ ಜೊತೆಗೆ ಬರಬೇಕಾದ ಸೌಲಭ್ಯಗಳನ್ನು ಕೇಂದ್ರ ಸರ್ಕಾರದಿಂದ ದೊರಕಿಸಿಕೊಳ್ಳುವ ಪ್ರಯತ್ನ ಈವರೆಗೆ ಕೈಗೂಡಿಲ್ಲ. ಆ ದಿಶೆಯಲ್ಲಿ ಪ್ರಯತ್ನಗಳು ಮುಂದುವರಿದಿವೆ. 
೮.       ನಾಡು ಹಾಗೂ ನುಡಿಯ ಆರಾಧನೆ ಮತ್ತು ಸಬಲೀಕರಣಕ್ಕೆ ಪೂರಕವಾಗುವ ಈ ರೀತಿಯ ಸಾಹಿತ್ಯ ಸಮ್ಮೇಳನಗಳು ೭೭ ವರ್ಷಗಳಷ್ಟು ದೀರ್ಘ ಕಾಲದಿಂದ ಭಾರತದ ಬೇರೆ ಯಾವುದೇ ರಾಜ್ಯದಲ್ಲಿ ನಡೆದಿಲ್ಲ ಎಂಬ ವಿಚಾರವನ್ನು ವಿಶ್ಲೇಷಿಸಿದಾಗ ಕನ್ನಡಿಗರ ಭಾಷೆ ಹಾಗೂ ನಾಡಪ್ರೇಮದ ಅರಿವಾಗುತ್ತದೆ.
೯.       ನುಡಿಯ ಆರಾದsನೆ ಸಾಹಿತ್ಯ ಸಮ್ಮೇಳನದ ಧ್ಯೇಯ.  ಕವಿಗಳು, ಸಾಹಿತಿಗಳು, ಸಂಶೋದsಕರು, ಅಧ್ಯಾಪಕರು, ವಿದ್ಯಾರ್ಥಿಗಳು ಮತ್ತು ಸಾಹಿತ್ಯಾಸಕ್ತರಿಗೆ ಇಂತಹ ನುಡಿಹಬ್ಬಗಳಲ್ಲಿ ಮಹತ್ವದ ಪಾತ್ರವಿರುತ್ತದೆ.  
೧೦.     ರಾಜಕಾರಣಗಳ ಪಾತ್ರ ಇಲ್ಲಿ ಗೌಣ. ಇಲ್ಲಿ ನಮ್ಮದು ಪೋಷಕ ಪಾತ್ರವಷ್ಟೆ. ಆದರೂ ಬರಹಗಾರರು, ಸೃಜನಶೀಲರು, ಚಿಂತಕರು ಮತ್ತು ಸಾದsಕರ ನಡುವೆ ನಾಡು ಮತ್ತು ನುಡಿ ಬಗ್ಗೆ ನಡೆಯುವ ಅರ್ಥಪೂರ್ಣ ಚರ್ಚೆ ಮತ್ತು ಚಿಂತನೆಗಳಿಂದ ಪ್ರಯೋಜನ ಪಡೆದು ಉತ್ತಮವಾದದ್ದನ್ನು ನಾಡಿಗೆ ನೀಡುವ ಅವಕಾಶ ದೊರೆಯುತ್ತದೆಂಬ ಕಾರಣಕ್ಕೆ ಅಧಿಕಾರಾರೂಢ ರಾಜಕಾರಣಗಳು ಸಮ್ಮೇಳನಗಳಲ್ಲಿ ಭಾಗವಹಿಸಲು ಇಚ್ಛಿಸುತ್ತಾರೆ. ನನ್ನದೂ ಕೂಡಾ ಇದೇ ಭಾವನೆಯಾಗಿದೆ.
೧೧.     ಆದ್ದರಿಂದ ರಾಜಕಾರಣಗೆ ಸಹಜವಾದ ಭಾಷಣ ಪ್ರೇಮದಿಂದ ಮುಕ್ತನಾಗಿ ಕೆಲವು ವಿಚಾರಗಳನ್ನಷ್ಟೇ ಹಂಚಿಕೊಂಡು ದೀರ್ಘ ಭಾಷಣಕ್ಕೆ ಮುಂದಾಗದೆ ಕೇವಲ ಕೇಳುಗನಾಗಿರಲು ಬಯಸುತ್ತೇನೆ.  
೧೨.     ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಗಳಲ್ಲಿ ಮುಂಚೂಣಿಯಲ್ಲಿರುವ ಕನ್ನಡ ಸಾಹಿತ್ಯ ಪರಿಷತ್ತು ಕನ್ನಡ ನಾಡು ನುಡಿ ಮುನ್ನಡೆಗಾಗಿ ನಿರಂತರವಾಗಿ ಶ್ರಮಿಸುತ್ತಿದೆ. ಕನ್ನಡ ಸಾಹಿತ್ಯ ಸಮ್ಮೇಳನವನ್ನು ನಾಡಿನ ಬೇರೆ ಬೇರೆ ಕಡೆಗಳಲ್ಲಿ ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿರುವುದು ಪ್ರಸಂಶನೀಯ. 
೧೩.     ನನ್ನ ಸಂಪುಟ ಸಹೋದ್ಯೋಗಿಯಾಗಿರುವ ಶ್ರೀ ಆರ್. ಅಶೋಕ್ ಅವರ ನೇತೃತ್ವದ ಸಮ್ಮೇಳನ ಸಮಿತಿಯು ಈ ವರ್ಷ ಬೆಂಗಳೂರಿನಲ್ಲಿ ಸಮ್ಮೇಳನವನ್ನು ಅತ್ಯಂತ ಅರ್ಥಪೂರ್ಣವಾಗಿ ಏರ್ಪಡಿಸಿರುವುದಕ್ಕೆ ಅವರನ್ನೂ ಕೂಡಾ ಅಭಿನಂದಿಸುತ್ತೇನೆ.
೧೪.     ಬೆಂಗಳೂರಿನ ಸಾಹಿತ್ಯ ಸಮ್ಮೇಳನಕ್ಕೆ ನಡೆದಾಡುವ ವಿಶ್ವಕೋಶ ಎಂದೇ ಖ್ಯಾತಿ ಪಡೆದಿರುವ ಹಿರಿಯ ಚೇತನ ಪ್ರೊ. ಜಿ. ವೆಂಕಟಸುಬ್ಬಯ್ಯ ಅವರಿಗೆ ಅದsಕ್ಷತೆಯ ಗೌರವ ಸಂದಿರುವುದು ಔಚಿತ್ಯಪೂರ್ಣವಾಗಿದೆ. ಎಂದೋ ಸಲ್ಲಬೇಕಾದ ಗೌರವ ಈಗಲಾದರೂ ಸಂದಿತಲ್ಲ ಎಂಬ ಸಂತಸ ನಮ್ಮೆಲ್ಲರದು.
೧೫.     ಶತಾಯುಷಿಯಾಗುವತ್ತ ಮುನ್ನಡೆದಿರುವ ಅವರ ವಿದ್ವತ್‌ಪೂರ್ಣ ಅಧ್ಯಕ್ಷೀಯ ಭಾಷಣವನ್ನು ಆಲಿಸಲು ನಿಮ್ಮೆಲ್ಲರಂತೆಯೇ ನಾನು ಸಹ ಉತ್ಸುಕನಾಗಿದ್ದೇನೆ.
೧೬.     ಸಾಹಿತ್ಯ ಸಮ್ಮೇಳನದ ಸ್ವರೂಪ ಮತ್ತು ಗಾತ್ರ ಇತ್ತೀಚಿನ ದಿನಗಳಲ್ಲಿ ಬಹಳವಾಗಿ ಹಿಗ್ಗಿದೆ. ಲಕ್ಷಾಂತರ ಮಂದಿ ಸಾಹಿತ್ಯಾಭಿಮಾನಿಗಳು ಈ ಸಮ್ಮೇಳನಗಳಲ್ಲಿ ಭಾಗವಹಿಸುತ್ತಿದ್ದಾರೆ. ಸಾಹಿತ್ಯದ ಚಿಂತನೆ ಮತ್ತು ಮಂಥನಕ್ಕೆ ಇದು ಸಹಕಾರಿಯಾಗುವಂತಹ ಅಂಶ.
೧೭.     ಸಾಹಿತ್ಯ ಮನುಷ್ಯರ ಬದುಕನ್ನು ನವಿರುಗೊಳಿಸುವ ಸಾದsನ. ಜ್ಞಾನ, ರಂಜನೆ ಮತ್ತು ಬೋದsನೆ ಎಲ್ಲಕ್ಕೂ ಸಾಹಿತ್ಯ ಮಾದsಮ. ಅರಿವು ನಮ್ಮೊಳಗೆ ಆತ್ಮ ಸಂವಾದಕ್ಕೆ ರಹದಾರಿ.
೧೮.     ನಾಡ ಜನತೆ ಎದುರಿಸುತ್ತಿರುವ ಸಾಮಾಜಿಕ ಮತ್ತು ಆರ್ಥಿಕ ತಲ್ಲಣಗಳಿಗೆ ಪರಿಹಾರ ಸೂಚಿಸಬಲ್ಲ ಸಾಹಿತ್ಯ ಸೃಜನೆ ಆಗಬೇಕು. ಅಂತಹ ಪ್ರಯತ್ನಗಳಿಗೆ ಸಾಹಿತ್ಯ ಸಮ್ಮೇಳನ ಇಂಬುಗೊಡಲಿ ಎಂದು ಆಶಿಸುತ್ತೇನೆ.
೧೯.     ಸಮ್ಮೇಳನಗಳು ಜಾತ್ರೆಯಂತೆ ನಡೆಯುತ್ತವೋ, ಅರ್ಥಪೂರ್ಣವಾಗಿ ಜರುಗತ್ತವೋ ಎಂಬ ಜಿಜ್ಞಾಸೆ ಇಂದಿಗೂ ಮುಂದುವರಿದಿದೆ. ಆದರೆ ನುಡಿ ಹಬ್ಬದ ಅಗತ್ಯವನ್ನು ಯಾರೂ ಪ್ರಶ್ನಿಸಲಾರರು. ಜನಾಭಿಪ್ರಾಯಕ್ಕೆ ಮನ್ನಣೆಯಿತ್ತು ಸಾಹಿತ್ಯ ಮತ್ತು ಸಂಸ್ಕೃತಿಯ ಸಂವದsನೆಗೆ ನೆರವಾಗುವುದಷ್ಟೇ ಸರ್ಕಾರದ ಕರ್ತವ್ಯ.
೨೦.     ನಮ್ಮ ಸರ್ಕಾರ ಈ ಕರ್ತವ್ಯ ನೆರವೇರಿಸುವಲ್ಲಿ ಎಂದಿಗೂ ಹಿಂದೆ ಬೀಳುವುದಿಲ್ಲ ಎಂಬ ಬsರವಸೆಯನ್ನು ನಾಡಿನ ಜನರಿಗೆ ನೀಡಬಯಸುತ್ತೇನೆ. ಕನ್ನಡ ಭಾಷೆ ಮತ್ತು ಸಂಸ್ಕೃತಿಯ ಸಂವರ್ಧನೆಗೆ ಪೂರಕವಾಗುವಂತಹ ಕಾರ್ಯಕ್ರಮಗಳಿಗೆ ೨೦೦ ಕೋಟಿ ರೂ.ಗಳಿಗೂ ಹೆಚ್ಚು ವಾರ್ಷಿಕ ಬಜೆಟ್ ಅನುದಾನ ಒದಗಿಸಿಕೊಟ್ಟ ತೃಪ್ತಿ ನಮ್ಮ ಸರ್ಕಾರಕ್ಕಿದೆ.
೨೧.     ನಾವು ಅಧಿಕಾರಕ್ಕೆ ಬರುವ ಮುನ್ನ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವಾರ್ಷಿಕ ಬಜೆಟ್ ಅನುದಾನ ೪೦ ರಿಂದ ೫೦ ಕೋಟಿ ರೂ.ಗಳಿತ್ತು. ಈಗ ೨೦೦ ಕೋಟಿ ರೂ.ಗಳನ್ನು ಮೀರಿದೆ.   
೨೨.     ಕನ್ನಡ ಸಾಹಿತ್ಯ ಪರಿಷತ್ತಿನ ಚಟುವಟಿಕೆಗಳಿಗೆ ಅಗತ್ಯವಾದ ಹಣಕಾಸಿನ ಬೆಂಬಲವನ್ನು ನಮ್ಮ ಸರ್ಕಾರ ನೀಡಿದೆ. ಮುಂದೆಯೂ ನೀಡಲು ಬದ್ಧವಾಗಿದೆ. ಆ ಕರ್ತವ್ಯ ನಿರ್ವಹಣೆಯಲ್ಲಿ ಯಾವುದೇ ಲೋಪಕ್ಕೆ ಎಡೆಗೊಡದಂತೆ ನಡೆದುಕೊಳ್ಳುವ ಭರವಸೆ ನೀಡುತ್ತೇನೆ.
೨೩.     ಸಾಹಿತ್ಯ ಪರಿಷತ್ತಿನಲ್ಲಿ ನೂತನವಾಗಿ ಸಂಶೋಧನಾ ಕೇಂದ್ರವೊಂದನ್ನು ನಮ್ಮ ಸರ್ಕಾರ ಸ್ಥಾಪಿಸಿದ್ದು, ಇದರ ಚಟುವಟಿಕೆಗಳಿಗಾಗಿ ಒಂದು ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದೆ.
೨೪.     ಜೊತೆಗೆ ಬೃಹತ್ ನಿಘಂಟುಗಳ ಮುದ್ರಣಕ್ಕಾಗಿ ಒಂದು ಕೋಟಿ ರೂ.ಗಳನ್ನು, ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಗಳಿಗೆ ತಲಾ ನಲವತ್ತೈದು ಲಕ್ಷ ರೂ.ಗಳನ್ನು ನಮ್ಮ ಸರ್ಕಾರ ಬಿಡುಗಡೆ ಮಾಡುತ್ತಿದೆ.
೨೫.     ಅಭಿಜಾತ ಭಾಷೆಯಾಗಿ ಮನ್ನಣೆ ಪಡೆದಿರುವ ಕನ್ನಡ ಭಾಷೆಯ ಒಟ್ಟಾರೆ ಅಭಿವೃದ್ಧಿಗೆ ವಿಶೇಷ ಕಾರ್ಯಕ್ರಮಗಳನ್ನು ರೂಪಿಸಲು ೨೦೧೦-೧೧ನೇ ಸಾಲಿನಲ್ಲಿ ೫೦ ಕೋಟಿ ರೂ.ಗಳನ್ನು ಪ್ರತ್ಯೇಕವಾಗಿ ಒದಗಿಸಲಾಗಿದೆ.
೨೬.     ವಿಕ್ಕಿಪೀಡಿಯಾ ಮಾದರಿಯಲ್ಲಿ ಕನ್ನಡ ಕಣಜ ಎಂಬ ಜ್ಞಾನಕೋಶವನ್ನು ಅಂತರ್ಜಾಲದಲ್ಲಿ ಚಾಲನೆ ನೀಡಲಾಗಿದೆ.
೨೭.     ಜ್ಞಾನಪೀಠ ಪ್ರಶಸ್ತಿ ವಿಜೇತ ಸಾಹಿತಿಗಳ ಗ್ರಂಥಗಳನ್ನು ಬೇರೆ ಭಾಷೆಗಳಿಗೆ ಅನುವಾದಿಸಲು ಕುವೆಂಪು ಭಾಷಾ ಭಾರತಿಗೆ ಒಂದು ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ.
೨೮.     ಬೆಳಗಾವಿಯಲ್ಲಿ ನಡೆಯಲಿರುವ ಮಹತ್ವದ ವಿಶ್ವ ಕನ್ನಡ ಸಮ್ಮೇಳನದ ಅಂಗವಾಗಿ ಕನ್ನಡ ಸಾಂಸ್ಕೃತಿಕ ಭವನವನ್ನು ನಿರ್ಮಿಸಲು ೨ ಕೋಟಿ ರೂ.ಗಳನ್ನು ಹಾಗೂ ಸಮ್ಮೇಳನದ ಸಿದ್ಧತೆಗಾಗಿ ೧೦ ಕೋಟಿ ರೂ.ಗಳನ್ನು  ಬಿಡುಗಡೆ ಮಾಡಲಾಗಿದೆ.
೨೯.     ಕರ್ನಾಟಕದ ಸಾಂಸ್ಕೃತಿಕ ಉತ್ಸವಗಳಾದ ದಸರಾ, ಹಂಪಿ ಉತ್ಸವ, ಕಿತ್ತೂರು ಉತ್ಸವ ಮೊದಲಾದ ಎಲ್ಲಾ ಉತ್ಸವಗಳಿಗೆ ಅಗತ್ಯವಾದ ಅನುದಾನವನ್ನು ನೀಡುವ ಮೂಲಕ ನಿರಂತರ ಪ್ರೋತ್ಸಾಹ ನೀಡಲು ನಾವು ನಿದsರಿಸಿದ್ದೇವೆ.
೩೦.     ಗಡಿನಾಡ ಕನ್ನಡಿಗರ ಮತ್ತು ಹೊರನಾಡ ಕನ್ನಡಿಗರ ಹಿತರಕ್ಷಣೆ ನಾಡವರ ಹಿತರಕ್ಷಣೆಯಷ್ಟೇ ಮುಖ್ಯ. ಆದ್ದರಿಂದ ಗಡಿನಾಡ ಪ್ರದೇಶಗಳ ಅಭಿವೃದ್ಧಿ ಹಾಗೂ ಗಡಿನಾಡ ಕನ್ನಡಿಗರ ಪುರೋಭಿವೃದ್ಧಿಗಾಗಿ ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರವನ್ನು ರಚಿಸಿದ್ದೇವೆ. 
೩೧.     ಆಡಳಿತದ ಎಲ್ಲಾ ಹಂತಗಳು ಮತ್ತು ನಮ್ಮ ಬದುಕಿನ ಎಲ್ಲಾ ಕ್ಷಣಗಳೂ ಕನ್ನಡಮಯವಾಗಬೇಕೆಂಬ ದಿಟ್ಟ ನಿರ್ಧಾರವನ್ನು ಸರ್ಕಾರ ಕೈಗೊಂಡಿದೆ.
೩೨.     ಕನ್ನಡದ ಕೆಲಸಗಳ ಅನುಷ್ಠಾನದ ಹೊಣೆಹೊತ್ತಿರುವ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕೆಲಸಗಳಿಗೆ ಅಗತ್ಯ ಅನುದಾನ ಮತ್ತು ಪೂರ್ಣ ಸಹಕಾರ ನೀಡುತ್ತಿರುವ ಸರ್ಕಾರ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾದ ಕನ್ನಡ ಸಾಹಿತ್ಯ ಪರಿಷತ್ತಿನ ಎಲ್ಲಾ ಚಟುವಟಿಕೆಗಳಿಗೂ ಹಣಕಾಸು ನೆರವು ಮತ್ತು ಪ್ರೋತ್ಸಾಹ ನೀಡಲು ಸಿದ್ಧವಿದೆ.
೩೩.      ಪ್ರತಿಯೊಂದು ಸಾಹಿತ್ಯ ಸಮ್ಮೆಳನಗಳಲ್ಲಿಯೂ ನಾಡು, ನುಡಿ ಕುರಿತಾದ  ಜ್ವಲಂತ ಸಮಸ್ಯೆಗಳನ್ನು ಚರ್ಚಿಸುತ್ತಿರುವುದು ಮತ್ತು ಆ ಬಗ್ಗೆ ನಿರ್ಣಯಗಳನ್ನು ಕೈಗೊಳ್ಳುತ್ತಿರುವುದು ಶ್ಲಾಘನೀಯ ಸಂಗತಿ.
೩೪.     ಈ ವರ್ಷ ಯಾವುದೇ ನೂತನ ನಿರ್ಣಯಗಳನ್ನು ಕೈಗೊಳ್ಳದೆ ಹಳೆಯ ನಿರ್ಣಯಗಳನ್ನೆಲ್ಲ ಅನುಷ್ಠಾನ ಮಾಡುವ ನಿರ್ಣಯವನ್ನಷ್ಟೆ ತೆಗೆದುಕೊಳ್ಳುವುದಾಗಿ ಈಗಾಗಲೇ ಸಮ್ಮೇಳನದ ಅಧ್ಯಕ್ಷರು ತಮ್ಮ ಅಭಿಪ್ರಾಯವನ್ನು ನೀಡಿದ್ದಾರೆ.  ಇದು ಸಹ ಶ್ಲಾಘನೀಯ.
೩೫.     ಆದಷ್ಟೂ ಅನುಷ್ಠಾನಯೋಗ್ಯವಾದ ನಿರ್ಣಯಗಳನ್ನು ಕೈಗೊಳ್ಳುವುದಲ್ಲದೇ ಅವುಗಳ ಅನುಷ್ಠಾನಕ್ಕೆ ಪೂರಕವಾದ ವಿಧಿವಿಧಾನಗಳನ್ನು ಸಿದ್ಧಪಡಿಸಿ ಸರ್ಕಾರಕ್ಕೆ ನೀಡಿದರೆ ಅವುಗಳನ್ನು ಕಾರ್ಯಗತಗೊಳಿಸಲು ನಮ್ಮ ಸರ್ಕಾರ ಶ್ರಮಿಸಲಿದೆ ಎಂದು ಈ ಸಂದಬsದಲ್ಲಿ ಹೇಳಲಿಚ್ಚಿಸುತ್ತೇನೆ.
೩೬.     ಕನ್ನಡ ಅಭಿವೃದ್ಧಿಗಾಗಿ ಅನೇಕ ಕೆಲಸಗಳು ಇನ್ನೂ ಬಾಕಿ ಇವೆ. ಸರೋಜಿನಿ ಮಹಿಷಿ ವರದಿಯನ್ವಯ ಕನ್ನಡಿಗರಿಗೆ ಉದ್ಯೋಗಾವಕಾಶಗಳು ಇನ್ನೂ ಹೆಚ್ಚಬೇಕಾಗಿದೆ. ಗಡಿ ಪ್ರದೇಶಗಳಲ್ಲಿ ಕನ್ನಡ ಮಕ್ಕಳಿಗೆ ಸೌಲಬsವನ್ನು ವೃದ್ಧಿಗೊಳಿಸಬೇಕಾಗಿದೆ.
೩೭.     ಕನ್ನಡ ನಾಡಿನ ಜನತೆಯ ಹಿತರಕ್ಷಣೆ, ಜನತೆಯ ಬದುಕು ಹಸನಾದರೆ ಆ ಜನರು ಆಡುವ ಭಾಷೆ, ಸಂಸ್ಕೃತಿ, ಆ ಜನರು ನಿರ್ಮಿಸುವ ಕಲೆಗಳು, ಸೃಷ್ಠಿಸುವ ಸಂಗೀತ ಎಲ್ಲವೂ ಉಜ್ವಲಗೊಳ್ಳುತ್ತವೆ.  ನಾವು ಈ ಕುರಿತು ವಿಶೇಷ ಹಾಗೂ ದಿಟ್ಟ ಹೆಜ್ಜೆಯನ್ನು ಇಟ್ಟಿದ್ದೇವೆ.
೩೮.     ಈ ಸಮ್ಮೇಳನದಲ್ಲಿ ಮೂರೂ ದಿನ ನಾಡು ಮತ್ತು ನುಡಿಯ ಬೆಳವಣಗೆಗೆ ಪೂರಕವಾದ ವಿವಿದs ವಿಷಯಗಳ ಬಗ್ಗೆ ವಿದ್ವತ್ ಗೋಷ್ಠಿಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
೩೯.      ಈ ಎಲ್ಲಾ ಕಾರ್ಯಕ್ರಮಗಳೂ ಯಶಸ್ವಿಯಾಗಿ ನೆರವೇರಲಿ. ಕನ್ನಡ ಜನಮನದಲ್ಲಿ ಹೊಸ ಸ್ಫೂರ್ತಿ ತುಂಬಲಿ ಎಂದು ಮನಃಪೂರ್ವಕವಾಗಿ ಹಾರೈಸಿ ೭೭ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಶುಬsಕೋರುತ್ತಾ ಕವಿ ನಿಸಾರ್ ಅಹಮ್ಮದ್ ಅವರ ಈ ಸಾಲುಗಳೊಂದಿಗೆ ನನ್ನ ಮಾತುಗಳನ್ನು ಮುಗಿಸುತ್ತೇನೆ.
"ಕನ್ನಡವಲ್ಲ ತಿಂಗಳು ನಡೆಸುವ ಗುಲ್ಲಿನ ಕಾಮನಬಿಲ್ಲು
ರವಿಶಶಿ ತಾರೆಯ ನಿತ್ಯೋತ್ಸವವಿದು
, ಸರಸತಿ ವೀಣೆಯ ಸೊಲ್ಲು" 
ಜೈ ಹಿಂದ್  ಜೈ ಕರ್ನಾಟಕ